29/04/2023
ಎಲ್ಲರಿಗೂ ನಮಸ್ಕಾರ
ದಿನಾಂಕ : 29/4/23 ರಂದು ಶನಿವಾರ ಭಾರತ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ
ಶ್ರೀ. ನರೇಂದ್ರ ಮೋದಿಜಿಯವರು
ಸ್ಥಳ ಮಾಗಡಿ ರಸ್ತೆ ನೈಸ್ ರೋಡ್ ಜಂಕ್ಷನ್ ನಿಂದ, ಸುಮ್ಮನಹಳ್ಳಿ ಸರ್ಕಲ್ ಹೊರಗೆ ಸಮಯ ಸಂಜೆ 6:00 pm ಗಂಟೆಯಿಂದ ಬೃಹತ್ ರೋಡ್ ಶೋ ಇರುವ ಹಿನ್ನೆಲೆಯಲ್ಲಿ ಮಾನ್ಯ ಸಹಕಾರ ಸಚಿವರಾದ
ಶ್ರೀ. ಎಸ್. ಟಿ. ಸೋಮಶೇಖರ್ ಅವರ ಸೂಚನೆ ಮೇರೆಗೆ ಹಾಗೂ ನಗರ ಮಂಡಲ ಅಧ್ಯಕ್ಷರಾದ ಅನಿಲ್ ಚಳಗೇರಿ ರವರ ಮಾರ್ಗದರ್ಶನದಂತೆ ಉಲ್ಲಾಳ ವಾರ್ಡಿನ ಮುಖಂಡರು, ಕಾರ್ಯಕರ್ತರುಗಳು ಶಕ್ತಿಕೇಂದ್ರದ ಅಧ್ಯಕ್ಷರುಗಳು, Booth ಅಧ್ಯಕ್ಷರುಗಳು, ಬೂತ್ ಕಮಿಟಿ ಸದಸ್ಯರುಗಳು, ಹಾಗೂ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಈ ಮೋದಿಜಿಯವರ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ವಿನಂತಿ.
ವಿಶೇಷ ಸೂಚನೆ: ಯಾರಿಗೂ ಯಾವುದೇ ಸವಲತ್ತು ಇರುವುದಿಲ್ಲ. ಎಲ್ಲರೂ ಸ್ವಯಂ ಪ್ರೇರಿತವಾಗಿ ಬರಬೇಕಾಗಿ ವಿನಂತಿ. ಮತ್ತು ಕಾರ್ಯಕರ್ತರು ಮುಖಂಡರು ಎಲ್ಲಾ ಪ್ರಧಾನಮಂತ್ರಿಗಳ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಒಂದು ಗಂಟೆ ಮುಂಚಿತವಾಗಿ ಅಂದರೆ ಸಂಜೆ 5:00 ಗಂಟೆಗೆ ಎಲ್ಲರೂ ಹಾಜರಿರಬೇಕಾಗಿ ವಿನಂತಿ. ಮತ್ತು ನಮ್ಮ ಎಲ್ಲಾ ಕಾರ್ಯಕರ್ತರುಗಳು ಗೌರವಾನ್ವಿತ ಪ್ರಧಾನ ಮಂತ್ರಿಗಳ ರೋಡ್ ಶೋ ಕಾರ್ಯಕ್ರಮದ ಬಗ್ಗೆ ನಿಮ್ಮ ಅಕ್ಕಪಕ್ಕ ಇರುವಂತಹ ನಿವಾಸಿಗಳ ಎಲ್ಲಾ ಮತದಾರ ಬಂಧುಗಳಿಗೂ ಈ ವಿಷಯವನ್ನು ತಲುಪಿಸಬೇಕಾಗಿ ವಿನಂತಿ.
ಇಂತಿ
ಜಯರಾಮ್. ಟಿ
ಅಧ್ಯಕ್ಷರು ಉಲ್ಲಾಳ ವಾರ್ಡ್
ಪ್ರಕಾಶ್/ ಗಿರೀಶ್
ಪ್ರಧಾನ ಕಾರ್ಯದರ್ಶಿಗಳು